ಗೋವಾ, ಮಹಾರಾಷ್ಟ್ರ ಸಿಎಂಗಳ ವಿರುದ್ಧ ಡಿಸಿಎಂ ಗೋವಿಂದ ಕಾರಜೋಳ ಕಿಡಿ

ಬೆಂಗಳೂರು| pavithra| Last Modified ಭಾನುವಾರ, 31 ಜನವರಿ 2021 (12:17 IST)
ಬೆಂಗಳೂರು : ಗಡಿ ವಿಚಾರದ ಬಗ್ಗೆ ಮಹಾರಾಷ್ಟ್ರದ ಸಿಎಂ ಹೇಳೆಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಗೋವಿಂದ ಕಾರಜೋಳ ರಾಜ್ಯದಲ್ಲಿ  ಮರಾಠಿಗರು, ಕನ್ನಡಿಗರು ಸಹೋದರರಂತಿದ್ದಾರೆ. ಕರ್ನಾಟಕದಲ್ಲಿ ಭಾಷಾ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರ ಮೂಲವೇ ಕರ್ನಾಟಕ. ಛತ್ರಪತಿ ಶಿವಾಜಿ ಮಹಾರಾಜರ ಮೂಲಪುರುಷ ಬೆಳ್ಳಿಯಪ್ಪ. ಬೆಳ್ಳಿಯಪ್ಪ ಗದಗ ಜಿಲ್ಲೆ ಸೊರಟೂರಿನವರು . ಬರ ಬಂದಾಗ ಬೆಳ್ಳಿಯಪ್ಪ ಮಹಾರಾಷ್ಟ್ರಕ್ಕೆ ಗುಳೆ ಹೋಗ್ತಾರೆ. ಅವರ 4ನೇ ತಲೆಮಾರಿಗೆ ಶಿವಾಜಿ ಮಹಾರಾಜರು ಬರುತ್ತಾರೆ. ಹಾಗಾಗಿ ಛತ್ರಪತಿ ಶಿವಾಜಿ ಮಹಾರಾಜರ ಮೂಲ ಕನ್ನಡದ ನೆಲ. ಇದನ್ನು ಮಹಾರಾಷ್ಟ್ರ  ಸಿಎಂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.> > ಮಹದಾಯಿ ವಿಚಾರವಾಗಿ ಗೋವಾ ಸಿಎಂ ಹೇಳಿಕೆ ವಿಚಾರ ಯಾರೂ ಯಾರ ಮಾತನ್ನು ಕೇಳುವ ಅಗತ್ಯವಿಲ್ಲ. ನಾವು ಕೂಡ ಯಾರ ಮಾತನ್ನು ಕೇಳಬೇಕಾಗಿಲ್ಲ. ನಾವು ಕೂಡ ನಮ್ಮ ನೆಲ, ಜಲದ ಪರ ಇರುತ್ತೇವೆ ಎಂದು ಅವರು ತಿಳಿಸಿದ್ದಾರೆ.   


ಇದರಲ್ಲಿ ಇನ್ನಷ್ಟು ಓದಿ :