ಡಿಸಿಎಂ ಸ್ವಕ್ಷೇತ್ರದ ಜನರು ಉಪಮುಖ್ಯಮಂತ್ರಿ ನಿವಾಸದಲ್ಲಿ ಇರೋವಾಗಲೇ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ನಡೆದಿದೆ. ಶಾಶ್ವತ ಸೂರು ಕಲ್ಪಿಸುವಂತೆ ಒತ್ತಾಯಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಮನೆಗೆ ಸಂತ್ರಸ್ತರು ಮುತ್ತಿಗೆ ಹಾಕಿದ್ರು.ಬೆಳ್ಳಂಬೆಳಿಗ್ಗೆ ಕಾರಜೋಳ ಅವರ ಮನೆಗೆ ಸಂತ್ರಸ್ತರು ಪಾದಯಾತ್ರೆ ಮೂಲಕ ತೆರಳಿ ಪ್ರತಿಭಟನೆ ಬಿಸಿ ಮುಟ್ಟಿಸಿ ಚಳಿ ಬಿಡಿಸಿದರು. ಯುಕೆಪಿ ಮಾದರಿಯಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆಗ್ರಹಿಸಲಾಯಿತು. ನೆರೆ ಸಂತ್ರಸ್ತರು ಮಳೆಗೆ ನಲುಗಿ ಹೋಗಿದ್ದು,