ಬೆಂಗಳೂರು: ಡಿಸಿಎಂ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ ಪ್ರಯಾಣಿಸುತ್ತಿದ್ದ ಕಾರು ಬೈಕ್ ಗೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ನಿನ್ನೆ ಸಂಜೆ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಕ್ರಾಸ್ ಬಳಿ ನಡೆದಿದೆ.ಘಟನೆ ನಡೆದ ತಕ್ಷಣ ಗಾಬರಿಗೊಂಡ ಚಿದಾನಂದ ತಂದೆಗೆ ಕರೆ ಮಾಡಿದ್ದು, ಲಕ್ಷ್ಮಣ್ ಸವದಿ ತಕ್ಷಣವೇ ಬಾಗಲಕೋಟೆ ಎಸ್ ಪಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ.ಅಪಘಾತವಾದ ತಕ್ಷಣ ಸವದಿ ಪುತ್ರ ಮತ್ತು ಸಂಗಡಿಗರು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.