ಜಲಾಶಯದಿಂದ ಬರುವ ನೀರನ್ನು ಬಳಸಿ ಎಂದು ಡಿಸಿಎಂ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಆಲಮಟ್ಟಿಯ ಜಲಾಶಯದಿಂದ ಏತನೀರಾವರಿ ಹಂತ 3 ರಡಿ ಬರುವ ಮುಳವಾಡ ಮತ್ತು ಚಿಮ್ಮಲಗಿ ಏತ ನೀರಾವರಿ ಯೋಜನೆಯ ಜಾಲದಡಿ ಬರುವ ಕೆರೆಗಳನ್ನು ತುಂಬಿಸಲು 2 ಟಿಎಂಸಿ ನೀರನ್ನು ಹರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.ಮುಳವಾಡ ಏತ ನೀರಾವರಿ ಜಾಲದಡಿ 70 ಕೆರೆಗಳು ಹಾಗೂ ಚಿಮ್ಮಲಗಿ ಏತನೀರಾವರಿ ಯೋಜನೆಯ ಜಾಲದಡಿ 29 ಕೆರೆಗಳನ್ನು ತುಂಬಿಸಲು ನೀರು