ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ನಗರ ಪರಿಶೀಲನೆಗೆ ಹೊರಟಿದ್ದ ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಪರಮೇಶ್ವರ್ ಕೆಆರ್ ಮಾರುಕಟ್ಟೆಯಲ್ಲಿನ ಅವಸ್ಥೆ ಕಂಡು ಕೆಂಡಾಮಂಡಲರಾಗಿದ್ದಾರೆ.ಇಲ್ಲಿನ ಮೀನು ಮಾರುಕಟ್ಟೆಯಲ್ಲಿ ಕಸದ ರಾಶಿ ಕಂಡು ಕೋಪಗೊಂಡ ಪರಮೇಶ್ವರ್ ಇಲ್ಲಿನ ಅಧಿಕಾರಿಗಳು ಯಾರು ಎಂದು ವಿಚಾರಿಸಿಕೊಂಡರು. ಈ ಸಂದರ್ಭದಲ್ಲಿ ವ್ಯಾಪಾರಿಗಳು ಡಿಸಿಎಂಗೆ ದೂರುಗಳ ಸರಮಾಲೆಯನ್ನೇ ನೀಡಿದರು. ಸರಿಯಾಗಿ ಕಸ ವಿಲೇವಾರಿಯಾಗುತ್ತಿಲ್ಲ. ಇಲ್ಲಿನ ಸಮಸ್ಯೆಗೆ ಅಧಿಕಾರಿಗಳು ತಲೆಕೊಡುತ್ತಿಲ್ಲ ಎಂದೆಲ್ಲಾ ವ್ಯಾಪಾರಿಗಳು ದೂರುತ್ತಿದ್ದಂತೆ ಪರಮೇಶ್ವ ಪಿತ್ತ ನೆತ್ತಿಗೇರಿತ್ತು.ತಕ್ಷಣವೇ ಇಲ್ಲಿನ ಅಧಿಕಾರಿಗಳನ್ನು