ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗುತ್ತಿರುವ ಅಪಾಯಕಾರಿ ಕೀಕಿ ಡ್ಯಾನ್ಸ್ ಚಾಲೆಂಜ್ ಮಾಡಲು ಹೋಗಬೇಡಿ ಎಂದು ಡಿಸಿಎಂ ಪರಮೇಶ್ವರ್ ಒತ್ತಾಯಿಸಿದ್ದಾರೆ.ವಿದೇಶದಲ್ಲಿ ಜನಪ್ರಿಯವಾಗಿರುವ ಚಲಿಸುವ ಕಾರಿನಿಂದ ಇಳಿದು ನೃತ್ಯ ಮಾಡುವ ಅಪಾಯಕಾರಿ ಚಾಲೆಂಜ್ ಮಾಡದಂತೆ ಈಗಾಗಲೇ ದೇಶದ ಇತರ ರಾಜ್ಯಗಳೂ ಎಚ್ಚರಿಕೆ ನೀಡಿವೆ. ಇದೀಗ ಕರ್ನಾಟಕದಲ್ಲೂ ಇದೇ ಸಾಹಸ ಮಾಡಲು ಹೋಗಿ ಬಿಗ್ ಬಾಸ್ ತಾರೆ ನಿವೇದಿತಾ ಗೌಡ ಪೊಲೀಸ್ ಕೇಸು ದಾಖಲಿಸಿಕೊಂಡಿದ್ದಾರೆ.ಇದರ ಬೆನ್ನಲ್ಲೇ ಗೃಹ ಸಚಿವರೂ ಆಗಿರುವ ಡಿಸಿಎಂ ಪರಮೇಶ್ವರ್