ಕಾನೂನು ಮುರಿಯುವವರಿಗೆ ಪೊಲೀಸರು ಗುಂಡು ಹಾರಿಸಿ ಕಾಲು ಮುರಿಯಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ರೌಡಿ ಚಟುವಟಿಕೆಗಳು, ಅಪರಾಧ ಕೃತ್ಯಗಳು ಬೇರೆಯವರಿಗೆ ತೊಂದರೆ ಕೊಟ್ಟು ಕಾನೂನು ಮುರಿಯುವ ಕೆಲಸಕ್ಕೆ ಯಾರೂ ಮುಂದಾಗಬಾರದು ಎಂದ ಅವರು, ಗಂಭೀರ ಪ್ರಮಾಣದ ಅಪರಾಧ ಕೃತ್ಯಗಳಲ್ಲಿ ತೊಡಗುವವರಿಗೆ ಗುಂಡು ಹಾರಿಸಿ ಕಾಲು ಮುರಿಯಿರಿ, ನಾವೇನು ಗುಂಡು ಹಾಕಬೇಡಿ ಎಂದು ಹೇಳುವುದಿಲ್ಲ ಎಂದು ಪೊಲೀಸರಿಗೆ ಅಭಯ ನೀಡಿದರು.ದೇವರಜೀವನಹಳ್ಳಿಯ ಪೊಲೀಸ್ ಠಾಣೆಯ ನೂತನ