ಬೆಂಗಳೂರು : ಇತಿಹಾಸದಲ್ಲೇ ಮೊದಲ ಬಾರಿಗೆ ಕುಮಾರಸ್ವಾಮಿ ಲೇಔಟ್ ಪೋಲಿಸ್ ಠಾಣೆಯ 71 ಸಿಬ್ಬಂದಿಗಳನ್ನು ಒಂದೇ ಬಾರಿಗೆ ವರ್ಗಾವಣೆ ಮಾಡಿ ದಕ್ಷಿಣ ವಿಭಾಗ ಡಿಸಿಪಿ ಅಣ್ಣಾಮಲೈ ಭರ್ಜರಿ ಸರ್ಜರಿ ನಡೆಸಿದ್ದಾರೆ. ಕುಮಾರಸ್ವಾಮಿ ಲೇಔಟ್ ಪೋಲಿಸ್ ಠಾಣೆಯಲ್ಲಿ ಗುಂಪುಗಾರಿಕೆ ಮಾಡುತ್ತಿದ್ದು, ಇತ್ತೀಚೆಗೆ ಪಿಎಸ್ ಐ ನರಸಿಂಹಯ್ಯ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾಗ ಮತ್ತೊಂದು ಗುಂಪು ವಿಡಿಯೋ ಮಾಡಿ ದೃಶ್ಯವಳಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು ಹಾಗೂ ಮತ್ತೆ ಕೆಲವರು ಠಾಣೆಯಲ್ಲಿದ್ದ ರೈಫಲ್ಗಳನ್ನು ಬಚ್ಚಿಟ್ಟು