ದಾವಣಗೆರೆ: ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿಗಳ ಬೇಜಾವಾಬ್ದಾರಿಯಿಂದ ಶವವನ್ನು ಅದಲು ಬದಲಾಗಿ ಹಸ್ತಾಂತರಿಸಿದ ಘಟನೆ ನಡೆದಿದೆ. ನಮ್ಮ ಜನಕ್ಕೆ ಎಲ್ಲದರಲ್ಲೂ ಗಡಿಬಡಿ ಜಾಸ್ತಿ ಹಾಗಾಗಿ ಶವವನ್ನು ಸರಿಯಾಗಿ ನೋಡದೇ ಅದಲಿ-ಬದಲಿ ಮಾಡಿಕೊಟ್ಟಿದ್ದಾರೆ. ವಿಷ ಸೇರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೆಂಚಮ್ಮ (60) ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ತರಲಾಗಿತ್ತು. ರಾತ್ರಿ ಮರಣೋತ್ತರ ಪರೀಕ್ಷೆ ಕೂಡ ಮಾಡಲಾಗಿತ್ತು. ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಕೆಂಚಮ್ಮನ ಶವದ ಪಕ್ಕ ಯುವತಿ ಶಿಲ್ಪಾ ಶವ ಕೂಡ ಇತ್ತು. ಹಾಗಾಗಿ