Widgets Magazine

ಗ್ರೀನ್ ಝೋನ್ ನಲ್ಲಿ ಡೆಡ್ಲಿ ಕೊರೊನಾ ಅಟ್ಟಹಾಸ

ರಾಯಚೂರು| Jagadeesh| Last Modified ಸೋಮವಾರ, 18 ಮೇ 2020 (18:46 IST)
ಕಳೆದ 50 ದಿನಗಳಿಂದ ಹಸಿರು ವಲಯದಲ್ಲಿ ಗುರುತಿಸಿಕೊಂಡಿದ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡಿದೆ.

ಮಹಾರಾಷ್ಟ್ರದಿಂದ ರಾಯಚೂರು ಜಿಲ್ಲೆಗೆ ಆಗಮಿಸಿದ 6 ಜನರಲ್ಲಿ ಕೋವಿಡ್-19 ಪಾಸಿಟಿವ್ ಪತ್ತೆಯಾಗಿದೆ. ನಗರದ ಆಟೋ ನಗರದ ಬಡಾವಣೆಯ ಒಂದೇ ಕುಟುಂಬಕ್ಕೆ ಸೇರಿದ ಮೂರು ಜನರಲ್ಲಿ, ಜೊತೆಗೆ ಸುಲ್ತಾನ್‌ಪುರ ಗ್ರಾಮದ ಓರ್ವ ಮತ್ತು ಮಸರಕಲ್ ಗ್ರಾಮದ ಇಬ್ಬರಿಗೆ ಕೊರೊನಾ ಸೋಂಕು ಹರಡಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ತಿಳಿಸಿದ್ದಾರೆ.

ಕಳೆದ 50 ದಿನಗಳಿಂದ ಕೊರೋನಾ ಪಾಸಿಟಿವ್ ಇಲ್ಲದೆ ರಾಯಚೂರು ಜಿಲ್ಲೆ ಹಸಿರು ವಲಯದಲ್ಲಿತ್ತು. ಸೇರಿದಂತೆ ವಿವಿಧ ರಾಜ್ಯಗಳಿಂದ ಮೇ 13 ರಿಂದ ಈಚೆಗೆ ಜಿಲ್ಲೆಗೆ ಆಗಮಿಸಿದವರನ್ನು ಪರೀಕ್ಷೆಗೊಳಪಡಿಸಿದಾಗ 6 ಜನರಲ್ಲಿ ಕೊರೋನಾ ಪಾಸಿಟಿವ್ ಅಂಶಗಳಿರುವುದು ಕಂಡುಬಂದಿದೆ.  





ಇದರಲ್ಲಿ ಇನ್ನಷ್ಟು ಓದಿ :