ಮುಂಬೈನಿಂದ ವಲಸೆ ಬಂದ 6 ತಿಂಗಳ ಹೆಣ್ಣು ಮಗು ಸೇರಿದಂತೆ ಒಟ್ಟು ಆರು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದರಲ್ಲಿ ಮುಂಬೈ ಪ್ರವಾಸ ಹಿನ್ನೆಲೆಯ 24 ವರ್ಷದ ಯುವತಿ (ರೋಗಿ ಸಂಖ್ಯೆ-1187) ಇವರು ಯಾದಗಿರಿ ಜಿಲ್ಲೆಯವರಾಗಿದ್ದು, ಪ್ರಸ್ತುತ ಕಲಬುರಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮುಂಬೈ ಪ್ರವಾಸ ಹಿನ್ನೆಲೆಯಿಂದ ಕಲಬುರಗಿ ನಗರದ ಶಹಾಬಜಾರ್ ತಾಂಡಾ ಮೂಲದ 22 ವರ್ಷದ ಮಹಿಳೆ (P-1194) ಮತ್ತು 24 ವರ್ಷದ ಮಹಿಳೆಗೆ (P-1195) ಕೋವಿಡ್-19 ಸೋಂಕು ಕಂಡುಬಂದಿದೆ.