ಮಹಿಳಾ ಸೆಕ್ಯೂರಿಟಿ ಗಾರ್ಡ್ ಗೆ ಲೈಂಗಿಕ ಕಿರುಕುಳ ನೀಡಿದ ಇಎಸ್‍ ಐ ಆಸ್ಪತ್ರೆಯ ಡೀನ್

ಕಲಬುರಗಿ, ಶುಕ್ರವಾರ, 11 ಅಕ್ಟೋಬರ್ 2019 (09:52 IST)

ಕಲಬುರಗಿ : ಇಎಸ್‍ ಐ ಆಸ್ಪತ್ರೆಯ ಡೀನ್ ಡಾ. ನಾಗರಾಜ್, ಆಸ್ಪತ್ರೆಯ ಮಹಿಳಾ ಸೆಕ್ಯೂರಿಟಿ ಗಾರ್ಡ್ ಗೆ ತನ್ನ ಜೊತೆ ಅನೈತಿಕ ಸಂಬಂಧ ಮಾಡುವಂತೆ ಒತ್ತಾಯ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.ಬಿಹಾರದ ಮೂಲದವಳಾದ ಸಂತ್ರಸ್ತೆ ಕಲಬುರಗಿ ಇಎಸ್‍ ಐ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಆಕೆ ರಾತ್ರಿ ಪಾಳೆಯದಲ್ಲಿ ಕೆಲಸ ಮಾಡುವಾಗ ಡೀನ್ ಡಾ. ನಾಗರಾಜ್, ಇಲ್ಲಿ ಕೆಲಸ ಮಾಡಬೇಕು ಎಂದರೆ, ನನ್ನ ಜೊತೆ  ಅನೈತಿಕ ಸಂಬಂಧ ಹೊಂದಬೇಕು. ಇಲ್ಲವಾದರೆ ಕೆಲಸದಿಂದ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.


 

ಈ ಬಗ್ಗೆ ಮಹಿಳೆ ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಈ ವೈದ್ಯ ನಾಗರಾಜ್ ಕನ್ನಡದ ಖ್ಯಾತ ನಟನ ಸಹೋದರಾನಾಗಿದ್ದು, ಹೀಗಾಗಿ ಪೊಲೀಸರು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.


 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಇಂದು ನಿಧನ

ಮಂಗಳೂರು : ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ...

news

ಮದುಮಗ ಟಾಯ್ಲೆಟ್ ನಲ್ಲಿ ನಿಂತ ಫೋಟೊವನ್ನು ಸರ್ಕಾರಕ್ಕೆ ನೀಡಿದ್ರೆ ವಧುವಿಗೆ ಸಿಗುತ್ತೆ ದುಡ್ಡು!

ಭೋಪಾಲ್ : ಮಧ್ಯಪ್ರದೇಶದಲ್ಲಿ ಮದುವೆಗೂ ಮುನ್ನ ವರನ ಫೋಟೋವನ್ನು ಕ್ಲಿಕ್ಕಿಸಿದರೆ ವಧುವಿಗೆ ಸರ್ಕಾರದಿಂದ 51 ...

news

ಚುನಾವಣೆ ವೇಳೆ ನೀಡಿದ ಆಶ್ವಾಸನೆ ಈಡೇರಿಸದ ಮೇಯರ್ ಗೆ ರೈತರು ಮಾಡಿದ್ದೇನು ಗೊತ್ತಾ?

ಮೆಕ್ಸಿಕೊ : ಚುನಾವಣೆಯ ವೇಳೆ ನೀಡಿದ ಆಶ್ವಾಸನೆಯನ್ನು ಈಡೇರಿಸದ ಮೇಯರ್ ರನ್ನು ರೈತರು ಟ್ರಕ್ಕಿನ ...

news

ಕದ್ದ ಬ್ಯಾಗ್ ನಲ್ಲಿ ಇದ್ದ ವಸ್ತುವನ್ನು ಕಂಡು ಓಡಿಹೋದ ಕಳ್ಳರು

ಕ್ಯಾಲಿಫೋರ್ನಿಯಾ : ಕದ್ದ ಬ್ಯಾಗ್ ನಲ್ಲಿ ಇದ್ದ ವಸ್ತುವನ್ನು ಕಂಡು ಕಳ್ಳರೇ ಹೌಹಾರಿ ಓಡಿಹೋದ ಘಟನೆ ...