ಟರ್ಕಿ, ಸಿರಿಯಾ ದೇಶಗಳಲ್ಲಿ ಸೋಮವಾರ ಸಂಭವಿಸಿದ ನಾಲ್ಕು ಭೂಕಂಪಗಳಿಂದ ಸಾವಿನ ಸಂಖ್ಯೆ ಕ್ಷಣಕ್ಷಣವೂ ಹೆಚ್ಚಾಗುತ್ತಿದೆ. ಬುಧವಾರ ಬೆಳಗಿನ ವರದಿಗಳ ಪ್ರಕಾರ ಸಾವಿನ ಸಂಖ್ಯೆ 7,800 ದಾಟಿದೆ. ಇದು ಅಧಿಕೃತವಾಗಿ ದೃಢಪಟ್ಟ ಸಾವುಗಳು. ಟರ್ಕಿಯೊಂದರಲ್ಲೇ 6 ಸಾವಿರದಷ್ಟು ಮಂದಿ ಸಾವನಪ್ಪಿದ್ದಾರೆ.