ರಸ್ತೆ ದಾಟುತ್ತಿದ್ದ ಜಿಂಕೆಗೆ ಬೆಂಜ್ ಕಾರೊಂದು ಡಿಕ್ಕಿಯಾಗಿ ಪರಾರಿಯಾಗಿರುವ ಘಟನೆ ತಡರಾತ್ರಿ ನಡೆದಿದೆ. ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗೇಟ್ ಬಳಿ ಈ ಘಟನೆ ನಡೆದಿದೆ.ಸುಮಾರು 4 ವರ್ಷದ ಹೆಣ್ಣು ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಡಿಕ್ಕಿಯ ರಭಸಕ್ಕೆ ಬೆಂಜ್ ಕಾರಿನ ಲೋಗೋ ಕೆಳಗೆ ಬಿದ್ದಿದ್ದರಿಂದ ಪೊಲೀಸರಿಗೆ ಕಾರು ಪತ್ತೆಹಚ್ಚಲು ಮಹತ್ವದ ಸುಳಿವು ಸಿಕ್ಕಂತಾಗಿದೆ.ಈ ಘಟನೆ ಕುರಿತು ಬಂಡೀಪುರ ಸಿಎಫ್ಓ ಅಂಬಾಡಿ ಮಾಧವನ್ ಪ್ರತಿಕ್ರಿಯಿಸಿದ್ದು, ಕಾರಿನ ಲೋಗೋ ಕಳಚಿ ಬಿದ್ದಿರುವುದರಿಂದ ಬೆಂಜ್