ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ದಾಂಧಲೆ ಮುಂದುವರೆದಿದ್ದು, ಕಾಡಾನೆಗಳ ದಾಳಿಗೆ ವಿದ್ಯುತ್ ಕಂಬಗಳು, ಟ್ರಾನ್ಸ್ಫಾರ್ಮರ್ ನೆಲಕ್ಕುರುಳಿವೆ. ಸಕಲೇಶಪುರ ತಾಲೂಕಿನ ನೀಚನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕಾಫಿ ಸೇರಿದಂತೆ ಅಪಾರ ಪ್ರಮಾಣದ ಬೆಳೆಯನ್ನ ಕಾಡಾನೆ ನಾಶ ಮಾಡಿದೆ.