ಗೃಹಗಳಿಗೆ ಲಕ್ಷ್ಮೀ ಒಲಿಯುತ್ತಾಳೆ ಎಂಬದು ಪ್ರಶ್ನೆಗೆಯಾಗಿಯೆ ಉಳಿದಿದೆ. ನಿತ್ಯವೂ ನೂರಾರು ಗೊಂದಲಗಳು ಸರ್ಕಾರಕ್ಕೆ ಗ್ಯಾರಂಟಿ ತಲೆನೋವಾಗಿಕಾಡ್ತಿವೆ. ಸರ್ಕಾರ ಇದೆ 14 ರಂದು ಗೃಹಲಕ್ಷ್ಮೀ ಯೋಜನೆ ಜಾರಿಮಾಡಲು ಪ್ರತಿ ಜಿಲ್ಲೆಗಳಲ್ಲಿ ಪ್ರಜಾಪ್ರತಿನಿಧಿಗಳ ಮೂಲಕ ಸರ್ವೇ ಮಾಡೋಕೆ ಪ್ಲಾನ್ ಮಾಡಿಕೊಂಡಿತ್ತು. ಅದರ ಸಂಪೂರ್ಣ ಹೊಣೆಯನ್ನು ಜಿಲ್ಲಾ ಉಸ್ತುವಾರಿಗಳಿಗೆ ನೀಡುವುದಾಗಿ ತಿಳಿಸಿತ್ತು ಅಂದುಕೊಂಡಂತೆ ಎಲ್ಲವು ಆಗಿದ್ದರೆ ಆಗಸ್ಟ್ ನಿಂದ ಮಹಿಳೆಯರಿಗೆ ಲಕ್ಷ್ಮೀ ಕಲಿಯಬೇಕಿತ್ತು. ಆದ್ರೆ ಇದೀಗ ಮತ್ತೆ ಗೃಹಲಕ್ಷ್ಮಿಗೆ ಕಂಟಕ ಎದುರಾಗಿದೆ.