ದಲ್ಲಾಳಿಗಳು ವ್ಯಾಪಾರಸ್ಥರ ಕೈಗೆ ಸಿಲುಕಿ ಮನಬಂದ ಬೆಲೆಗೆ ಬೆಳೆಗಳನ್ನು ಮಾರುತ್ತಿದ್ದ ರೈತರಿಗೆ ಇದೀಗ ಸರ್ಕಾರವೇ ತೆರೆದ ಬೆಂಬಲ ಬೆಲೆ ಯೋಜನೆಯ ಕಡಲೆ ಖರೀದಿ ಕೇಂದ್ರ ವರದಾನವಾಗಿದೆ.ಕುಂದಗೋಳ ಪಟ್ಟಣದ ಎಪಿಎಂಸಿಯಲ್ಲಿನ ಕಡಲೆ ಖರೀದಿ ಕೇಂದ್ರಕ್ಕೆ ಈ ವರ್ಷವೇ ಅತ್ಯಧಿಕ 1460 ಅರ್ಜಿಗಳು ಕಡಲೆ ಖರೀದಿಗಾಗಿ ಸಲ್ಲಿಕೆಯಾಗಿವೆ. ಮಾ.13 ಸೋಮವಾರದಿಂದ ಕಡಲೆ ಖರೀದಿ ಸಹ ಆರಂಭವಾಗಿದ್ದು, ರೈತರು ಅತಿ ಉತ್ಸಾಹದಿಂದ ತಮ್ಮ ತಮ್ಮ ಕಡಲೆ ಬೆಳೆಗಳನ್ನು ಮಾರಾಟ ಮಾಡಲು ಬಂದಿದ್ದು ಕುಂದಗೋಳ ಎಪಿಎಂಸಿ ಸುತ್ತ