ಆ ಗ್ರಾಮದಲ್ಲಿ ಇಡೀ ಊರಿಗೆ ಊರೇ, ಕಂಬನಿ ಮಿಡಿದಿತ್ತು. ಅಮರ ರಹೇ ಸಂತೋಷ ಅಮರ ರಹೇ ಅಂತಾ ಘೋಷಣೆ ಎಲ್ಲಡೆ ಮುಳುಗಿತ್ತು. ಪಂಚ ಭೂತಗಳಲ್ಲಿ ಲೀನವಾದ ವೀರ ಯೋಧನಿಗೆ ಮತ್ತೆ ಹುಟ್ಟಿ ಬಾ ಅಂತಾ ಘೋಷಣೆ ಮುಗಿಲು ಮುಟ್ಟಿತ್ತು. ಇನ್ನು ವೀರ ಮರಣ ಹೊಂದಿದ ಯೋಧ ಸಂತೋಷನಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಗೌರವ ನೀಡಿ ಅಂತ್ಯಕ್ರಿಯೆ ನೆರವೇರಿಸಲಾಯಿತು.ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಗಾ ಗ್ರಾಮದಲ್ಲಿ ಕಂಬನಿ ಮುಗಿಲು ಮುಟ್ಟಿತ್ತು. ಛತ್ತಿಸಗಡದ