ಸಮಿಶ್ರ ಸರಕಾರದಲ್ಲಿ ಸಮನ್ವಯ ಸಮಿತಿಯೊಂದು ರಚನೆಯಾಗಿದೆ. ಆದ್ರೆ ಸಮನ್ವಯ ಸಮಿತಿ ಗಲಾಟೆ ಸಮಿತಿ. ಸರಕಾರದಲ್ಲಿಯೇ ಭಿನ್ನಭಿಪ್ರಾಯ ಮೂಡಿಸುವವರೇ ಈ ಸಮನ್ವಯ ಸಮಿತಿಯ ಸದಸ್ಯರಾಗಿದ್ದಾರೆ. ಜಿಲ್ಲೆಗೆ ಉಸ್ತುವಾರಿ ನೇಮಕ ಮಾಡುವಲ್ಲಿ ಸಮಿಶ್ರ ಸರಕಾರದಲ್ಲಿ ಗೊಂದಲವಿದೆ.ಅಬಿವೃದ್ದಿಯ ಹಿತ ದೃಷ್ಟಿಯಲ್ಲಿ ಉಸ್ತುವಾರಿಯನ್ನು ಆಗಸ್ಟ್ 15 ರೊಳಗಾಗಿ ನೇಮಕ ಮಾಡಬೇಕು. ಕನಿಷ್ಠ ಪಕ್ಷ ಅಗಸ್ಟ್ 15 ರಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆದ್ರೂ ಉಸ್ತುವಾರಿಯ ನೇಮಕವನ್ನು ಸರಕಾರ ಮಾಡಬೇಕು ಎಂದು ವಿಪಕ್ಷಗಳ ಮುಖಂಡರು ವ್ಯಂಗ್ಯವಾಡಿದ್ದಾರೆ.