ಹಂಪಿ ಉತ್ಸವ ನಡೆಸುವಂತೆ ಆಗ್ರಹಿಸಿ ಜ.13 ರಂದು ಹೊಸಪೇಟೆಯ ತಹಸಿಲ್ದಾರ್ ಕಚೇರಿಯಿಂದ ಹಂಪಿವರೆಗೆ ಕರ್ನಾಟಕ ಜನ ಕಲ್ಯಾಣ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಕಲಾವಿದರು, ಸಾಹಿತಿಗಳು ಪಾದಯಾತ್ರೆ ನಡೆಸಲಿದ್ದಾರೆ.ಸುದ್ದಿಗೋಷ್ಟಿ ನಡೆಸಿದ ಜನ ಕಲ್ಯಾಣ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಜೆ.ಎಂ.ಬಸವರಾಜ್ ಸ್ವಾಮಿ, ಪ್ರತಿ ವರ್ಷದಂತೆ ಈ ವರ್ಷ ನವೆಂಬರ್ 3 ರಿಂದ ಹಂಪಿ ಉತ್ಸವ ನಡೆಸಲು ಎಲ್ಲಾ ಸಿದ್ದತೆಯನ್ನು ಜಿಲ್ಲಾಡಳಿತ ನಡೆಸಿತ್ತು. ಈ ಕುರಿತು ಅನೇಕ ಪೂರ್ವಭಾವಿ ಸಭೆಗಳನ್ನು ನಡೆಸಿತ್ತು. ಕಲಾವಿದರಿಂದ