ಬೆಂಗಳೂರು : ಬೇಸಿಗೆ ಬಂದರೆ ಸಾಕು ಮಾವುಗಳದೇ ಸಾಮ್ರಾಜ್ಯ. ಮ್ಯಾಂಗೋ ಕೊಳ್ಳದವರೇ ಇಲ್ಲ. ಮಾವಿನ ಹಣ್ಣಿನ ರುಚಿ ಸವಿಬೇಕು ಅನ್ನೋರಿಗೆ ಈ ಬಾರಿ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಯುಗಾದಿ ಬಳಿಕ ಎಲ್ಲಿ ನೋಡಿದ್ರೂ ಘಮಘಮಿಸುವ ಮಾವಿನ ಹಣ್ಣುಗಳದ್ದೇ ಕಾರುಬಾರು. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಮಾವು ಬೆಳೆ ನಿರೀಕ್ಷೆಗಿಂತ ಕಡಿಮೆ ಫಸಲು ಬಂದಿದೆ. ಏಪ್ರಿಲ್ ಅಂತ್ಯಕ್ಕೆ ಫಸಲು ಕೈಗೆ ಬರುವ ನಿರೀಕ್ಷೆ ಇದೆ.