ಧಾರವಾಡ : ಸೆಪ್ಟೆಂಬರ್ 1 ರಿಂದ 20 ರವರೆಗೆ ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಗ್ನಿಪಥ್ ಯೋಜನೆ ಅಡಿಯಲ್ಲಿ ಸೇನಾ ಭರ್ತಿಗಾಗಿ ದೈಹಿಕ ಪರೀಕ್ಷೆ ನಡೆಯಲಿವೆ.ಈ ದೈಹಿಕ ಪರೀಕ್ಷೆಗೆ ಸಾಕಷ್ಟು ವಿದ್ಯಾರ್ಥಿಗಳು ಹೋಗಲು ತಯಾರಿ ನಡೆಸಿದ್ದಾರೆ. ಆದರೆ ಈಗ ಆ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಆರಂಭವಾಗಿದೆ.ಧಾರವಾಡ ಕರ್ನಾಟಕ ವಿವಿಯ ಪದವಿ ಪರೀಕ್ಷೆಗಳು ಕೂಡಾ ಇದೇ ಸಮಯದಲ್ಲಿ ಇವೆ. ಈಗಾಗಲೇ ಆಗಸ್ಟ್ 29 ರಿಂದ ಸೆಪ್ಟೆಂಬರ್ 20ರವರೆಗೆ ಕರ್ನಾಟಕ ವಿವಿ