ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಹಡಲಸಂಗ ಗ್ರಾಮದಲ್ಲಿ ಕಿರಾಣಿ ಅಂಗಡಿಗಳ ಸಂಖ್ಯೆಗಿಂತ ಸರಾಯಿ ಅಂಗಡಿಗಳೇ ಹೆಚ್ಚು ಇವೆ. ಹೀಗಾಗಿ ಅಕ್ರಮ ಸರಾಯಿ ಅಂಗಡಿಗಳು ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಬೇಕೆಂದು ಮಹಿಳೆಯರು ಗ್ರಾಮ ಪಂಚಾಯಿತಿಯ ಎದುರಿಗೆ ಪ್ರತಿಭಟನೆ ನಡೆಸಿದ್ದಾರೆ. ಗ್ರಾಮದಲ್ಲಿ ರಾಜಾರೋಷವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದಾರೆ. ಸರಾಯಿ ಸೇವನೆಯಿಂದ ಹಲವಾರು ಕುಟುಂಬಗಳು ಬೀದಿಗೆ ಬಂದಿದ್ದು, ಹಲವಾರು ಜನ ಸಾವನ್ನಪ್ಪಿದ್ದಾರೆ. ಸರಾಯಿ ಕುಡಿದು ಸಾಲ ಮಾಡಿ ಸಾಲದ ಕಿರಿಕಿರಿ ತಾಳದೆ ಮತ್ತಿನ