ಬೆಂಗಳೂರು : ಚುನಾವಣಾ ವ್ಯವಸ್ಥೆ ಬದಲಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ.ಇದರ ಸುಧಾರಣೆಯಾಗದೆ ಹೋದರೆ ಪ್ರಜಾಪ್ರಭುತ್ವ ದುರ್ಬಲವಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.ಚುನಾವಣಾ ಸುಧಾರಣೆಗಳ ಬಗ್ಗೆ ಇಂದಿನ ಅಧಿವೇಶನದಲ್ಲಿ ಮಾತನಾಡಿ ಅವರು, ಪ್ರಜಾಪ್ರಭುತ್ವ ದುರ್ಬಲವಾದರೆ ಸಮಾಜ, ದೇಶ ದುರ್ಬಲವಾಗುತ್ತದೆ.ಎಪ್ಪತ್ತರ ದಶಕದಿಂದ ಈಚೆಗೆ ಚುನಾವಣಾ ವ್ಯವಸ್ಥೆ ಕೆಡಲು ಆರಂಭವಾಯಿತು ಎಂದು ಸಭಾದ್ಯಕ್ಷರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಹೇಳಿದ್ದಾರೆ. ಚುನಾವಣಾ ವ್ಯವಸ್ಥೆ ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಬಲಿಷ್ಠವಾಗುತ್ತಾ ಹೋಗಬೇಕಿತ್ತು.ಆದರೆ ನಮ್ಮಲ್ಲಿ