Widgets Magazine

ಕರಾವಳಿಯಲ್ಲಿ ಕೊರೋನಾ ಜತೆಗೆ ಡೆಂಗ್ಯೂ ಭೀತಿ

ಮಂಗಳೂರು| Krishnaveni K| Last Modified ಭಾನುವಾರ, 28 ಜೂನ್ 2020 (09:13 IST)
ಮಂಗಳೂರು: ಕೊರೋನಾ ಮಹಾಮಾರಿ ಈಗಾಗಲೇ ವಿಶ್ವವನ್ನೇ ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದೆ. ಅದರ ಜತೆಗೆ ಕರಾವಳಿಯಲ್ಲಿ ಈಗ ಡೆಂಗ್ಯೂ ಜ್ವರದ ಹಾವಳಿ ಹೆಚ್ಚಾಗಿದೆ.

 
ದ.ಕನ್ನಡ ಜಿಲ್ಲೆ, ಕೇರಳದ ಕಾಸರಗೋಡಿನಲ್ಲಿ ಡೆಂಗ್ಯೂ ಜ್ವರದ ಪ್ರಕರಣ ದಿನೇ ದಿನೇ ಹೆಚ್ಚುತ್ತಿದೆ. ಕೊರೋನಾದಂತೆಯೇ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವುದು ಹೊಸ ತಲೆನೋವು ತಂದೊಡ್ಡಿದೆ.
 
ಅಲ್ಪ ಸ್ವಲ್ಪ ಮಳೆಯಾಗಿರುವುದರಿಂದ ಸೊಳ್ಳೆಗಳಿಂದಾಗಿ ಈ ರೋಗ ಹರಡುತ್ತಿದೆ. ಹೀಗಾಗಿ ಕೊರೋನಾದಂತೆಯೇ ಪೀಡಿತರೂ ಆಸ್ಪತ್ರೆಗೆ ಅಲೆದಾಡುವಂತಾಗಿದೆ.  




ಇದರಲ್ಲಿ ಇನ್ನಷ್ಟು ಓದಿ :