Widgets Magazine

ಸಿದ್ದರಾಮಯ್ಯ ಡೋಂಗಿ ವ್ಯವಹಾರ ಬಿಡಲಿ ಎಂದ ದೇವೇಗೌಡ

ಮೈಸೂರು| Hanumanthu.P| Last Modified ಶುಕ್ರವಾರ, 29 ಡಿಸೆಂಬರ್ 2017 (15:16 IST)
ಮುಖ್ಯಮಂತ್ರಿ ಸಿದ್ದರಾಮಯ್ಯ
ನೀರಾವರಿ ವಿಷಯದಲ್ಲಿ ಡೋಂಗಿ ವ್ಯವಹಾರ ಬಿಟ್ಟು ನನ್ನ ಜತೆ ಹೋರಾಟಕ್ಕೆ ಬರಲಿ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ಸವಾಲು ಹಾಕಿದ್ದಾರೆ.

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ಹೋರಾಟಕ್ಕೆ ಕರೆದ ಕಾರಣಕ್ಕೆ ನಾನು ಹೋಗಿಲ್ಲ. ಸ್ವಯಂ ಪ್ರೇರಿತವಾಗಿ ಹೋಗಿದ್ದೆ. ನೆಲ, ಜಲ ವಿಷಯದಲ್ಲಿ ದೇವೇಗೌಡ ಪಕ್ಷಾತೀತ ಹೋರಾಟಕ್ಕೆ ಸದಾ ಸಿದ್ದನಾಗಿರುತ್ತೇನೆ ಎಂದಿದ್ದಾರೆ.

ನೀರಾವರಿ ವಿಷಯದಲ್ಲಿ ಸಿದ್ದರಾಮಯ್ಯ ಅವರು ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕು. ಬಾಯಿಗೆ ಬಂದಂತೆ ಮಾತನಾಡಬಾರದು ಎಂದು ಕಿಡಿಕಾರಿದ ಅವರು, ಕೃಷ್ಣಾ ನೀರಾವರಿ ಯೋಜನೆಯನ್ನು ರೂಪಿಸಿದವರು ಯಾರು? ದೆಹಲಿಗೆ ಹೋಗಿ ಅವನ್ನು ಅನುಷ್ಠಾನಗೊಳಿಸಿದವರು ಯಾರು? ದೇವೇಗೌಡರಾ, ಸಿದ್ದರಾಮಯ್ಯನಾ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :