ಹಾಸನ ಜಿಲ್ಲೆಯ ಶ್ರವಣ ಬೆಳಗೊಳದ ವಿಂಧ್ಯಗಿರಿಯನ್ನು 85 ವರ್ಷ ಇಳಿ ವಯಸ್ಸಿನಲ್ಲೂ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಅವರು ನಡೆದು ಕೊಂಡು ಏರಿ ಬಾಹುಬಲಿಯ ಮಹಾ ಮಸ್ತಕಾಭಿಷೇಕ ದರ್ಶನ ಪಡೆದಿದ್ದಾರೆ. ಸುಡು ಬಿಸಿಲಿನಲ್ಲೂ ಬರಿಗಾಲಿನಲ್ಲೇ ವಿಂಧ್ಯಗಿರಿ ಹತ್ತುವ ಮೂಲಕ ದೇವೇಗೌಡರು ಗಮನ ಸೆಳೆದಿದ್ದಾರೆ. ದೇವೇಗೌಡರ ಪತ್ನಿ ಚೆನ್ನಮ್ಮ ಅವರು ಕೆಲಕಾಲ ಸಾಥ್ ನೀಡಿದ್ದು, ನಂತರ ಅವರನ್ನು ಡೋಲಿಯ ಸಹಾಯದಿಂದ ಕರೆದುಕೊಂಡು ಹೋಗಲಾಯಿತು. ಫೆ. 17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ