ಜೆಡಿಎಸ್ ಶಾಸಕ ಪಿಳ್ಳಮುನಿಶಾಮಪ್ಪಗೆ ದೇವೇಗೌಡರ ಭರವಸೆ

ಬೆಂಗಳೂರು| Rajesh patil| Last Modified ಗುರುವಾರ, 23 ಫೆಬ್ರವರಿ 2017 (19:17 IST)
ನಾರಾಯಣಪ್ಪರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿ ನನ್ನನ್ನು ಕಡೆಗೆಣಿಸುತ್ತಿದ್ದಾರೆ ಎಂದು ಆರೋಪಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಜೆಡಿಎಸ್ ಶಾಸಕ ಅವರಿಗೆ ದೇವೇಗೌಡರು ಭರವಸೆ ನೀಡಿದ್ದಾರೆ.
ನವದೆಹಲಿಯಿಂದ ಬಂದ ನಂತರ ಗೊಂದಲಗಳನ್ನು ಸರಿಪಡಿಸುವುದಾಗಿ ಪಿಳ್ಳಮುನಿಶಾಮಪ್ಪ ಅವರಿಗೆ ಭರವಸೆ ನೀಡಿದ ದೇವೇಗೌಡರು, ನಾನು ಬೆಂಗಳೂರಿಗೆ ಬರುವವರೆಗೆ ತಾಳ್ಮೆಯಿಂದಿರಿ ಎಂದು ಮನವಿ ಮಾಡಿದ್ದಾರೆ.
ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ದೂರವಾಣಿ ಕರೆ ಮಾಡಿದರೆ ಕುಮಾರಸ್ವಾಮಿ ಸ್ಪಂದಿಸುವುದಿಲ್ಲ. ಹಲವು ವರ್ಷಗಳಿಂದ ಪಕ್ಷಕ್ಕೆ ನಿಷ್ಠೆಯಿಂದ ದುಡಿದ ನನ್ನನ್ನು ಕಡೆಗೆಣಿಸಿ ಮೂರನೇಯವರಿಗೆ ಮಣೆಹಾಕುವುದು ಸರಿಯಲ್ಲ ಎಂದು ಪಿಳ್ಳಮುನಿಶಾಮಪ್ಪ ದೇವೇಗೌಡರಿಗೆ ನೊಂದು ನುಡಿದಿದ್ದಾರೆ ಎನ್ನಲಾಗಿದೆ.

ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಮಾತನಾಡಿದ ನಿಸರ್ಗ ನಾರಾಯಣಸ್ವಾಮಿ, ನಾನು ನಿನ್ನೆ ರಾತ್ರಿಯಷ್ಟೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಆದ್ದರಿಂದ ಶಾಸಕ ಪಿಳ್ಳಮುನಿಶಾಮಪ್ಪ ಧೃತಿಗೆಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :