ಬೆಂಗಳೂರು: ಸಿಎಂ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಬಂಡಾಯದಿಂದಾಗಿ ಗೊಂದಲದ ಗೂಡಾಗಿರುವಾಗ ದೇವೇಗೌಡರ ಕುಟುಂಬ ದೇವರ ಮೊರೆ ಹೋಗಿದೆ.ಸಿಎಂ ಕುಮಾರಸ್ವಾಮಿ ಪಟ್ಟಕ್ಕೆ ಯಾವುದೇ ವಿಘ್ನ ಬಾರದಂತೆ ಎಚ್ ಡಿ ದೇವೇಗೌಡರ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಶೃಂಗೇರಿ ಶಾರದಾಂಬೆ ದೇವಾಲಯಕ್ಕೆ ಭೇಟಿ ನೀಡಿದ ಕುಟುಂಬ ವರ್ಗ ವಿಶೇಷ ಪೂಜೆ ಸಲ್ಲಿಸಿತು.ದೇವೇಗೌಡರ ಜತೆಗೆ ಪತ್ನಿ ಚೆನ್ನಮ್ಮ, ಸೊಸೆ ಅನಿತಾ ಕುಮಾರಸ್ವಾಮಿ ಕೂಡಾ ಆಗಮಿಸಿದ್ದರು. ಬೆಳಿಗ್ಗೆಯೇ ದೇವಾಲಯಕ್ಕೆ ಬಂದ ದೇವೇಗೌಡರ ಕುಟುಂಬ ಭಕ್ತಿಯಿಂದ