ಇಂದು 16 ನೇ ಲೋಕಸಭಾ ಚುನಾವಣೆಯ ಫಲಿತಾಂಶ. ಮುಂದಿನ ಐದು ವರ್ಷಗಳಲ್ಲಿ ಭವ್ಯ ಭಾರತವನ್ನು ನಿರ್ಮಾಣಕ್ಕಾಗಿ ಮತದಾರರು ನೀಡಿರುವ ತೀರ್ಪನ್ನು ಇಂದು ಪ್ರಕಟಿಸುವ ಸುದಿನ. ತಮ್ಮನ್ನೇ ಗೆಲ್ಲಿಸುವಂತೆ ಎಲ್ಲ ಅಭ್ಯರ್ಥಿಗಳೂ ಬೆಳಿಗ್ಗೆಯಿಂದಲೇ ದೇವರ ಮೊರೆ ಹೋಗುತ್ತಿರುವುದಂತೂ ಸತ್ಯ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿದ್ದರೆ. ಯಾವುದನ್ನೂ ತಲೆ ಕೆಡಿಸಿಕೊಳ್ಳದೇ ನಿರಾಳವಾಗಿ ನಿರುಮ್ಮಳವಾಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಏಕೈಕ ವ್ಯಕ್ತಿ ಎಚ್.ಡಿ.ದೇವೇಗೌಡರು!. ಹೌದು, ತಮ್ಮ ಕೊನೆಯ ಲೋಕಸಭಾ ಚುನಾವಣೆಯನ್ನು ಎದುರಿಸಿರುವ