ಶಿವಮೊಗ್ಗ: ಬಿಜೆಪಿ ಭದ್ರಕೋಟೆಯಾದ ಶಿವಮೊಗ್ಗ ಲೋಕಸಭೆ ಉಪಚುನಾವಣೆಗೆ ಸ್ಟಾರ್ ಕಳೆ ಬಂದಿದ್ದು, ಇಲ್ಲಿ ಜೆಡಿಎಸ್ ಗೆಲ್ಲಿಸಲು ಸಿದ್ದರಾಮಯ್ಯ ಮತ್ತು ದೇವೇಗೌಡರು ಜಂಟಿಯಾಗಿ ಪ್ರಚಾರ ಮಾಡಲಿದ್ದಾರೆ. ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಲಿರುವ ದೇವೇಗೌಡರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದಾರೆ. ನಾಳೆಯಿಂದ ವಿದೇಶ ಪ್ರವಾಸ ಕೈಗೊಳ್ಳಲಿರುವ ದೇವೇಗೌಡರು ವಾಪಸಾದ ಬಳಿಕ ಅಕ್ಟೋಬರ್ 29 ರಂದು ಸಿದ್ದರಾಮಯ್ಯ-ದೇವೇಗೌಡರು ಜತೆಯಾಗಿ ಶಿವಮೊಗ್ಗದಲ್ಲಿ ಪ್ರಚಾರ ನಡೆಸಲಿದ್ದಾರೆ.ಇದುವರೆಗೆ ಬದ್ಧ ವೈರಿಗಳಾಗಿದ್ದ ಸಿದ್ದರಾಮಯ್ಯ-ದೇವೇಗೌಡರು ಮೊನ್ನೆಯಷ್ಟೇ ವೇದಿಕೆ ಹಂಚಿಕೊಂಡು