ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡ್ರೆ ಕುಮಾರಸ್ವಾಮಿಯವರನ್ನು ಮನೆಯಿಂದ ಹೊರಗಡೆ ಹಾಕುತ್ತೇನೆ ಎನ್ನುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ಟೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡ ಹೇಳಿಕೆ ಬರೀ ನಾಟಕ, ರಾಜಕೀಯ ಗಿಮಿಕ್ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕಾಗಿ ಹಾಗೂ ಅಲ್ಪಸಂಖ್ಯಾಯತರ ಮತಗಳನ್ನು ಪಡೆಯೋದಿಕ್ಕಾಗಿ ದೇವೇಗೌಡರು ಈ ರೀತಿ ಮಾಡ್ತಿದ್ದಾರೆ. ಈ ಹಿಂದೆ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ ಮಾಡಿದ್ರೆ ಕುಮಾರಸ್ವಾಮಿಯನ್ನು ಮನೆಯಿಂದ ಹೊರಗಡೆ ಹಾಕ್ತಿನಿ