ವಿಭಿನ್ನವಾಗಿ ಜೈಕಾರ ಹಾಕಿದ ಅಭಿಮಾನಿಯೊಬ್ಬ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಅವರನ್ನು ಖುಷಿ ಪಡಿಸಿದ್ದಾರೆ. ವರದರಾಜಸ್ವಾಮಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ರಮಕ್ಕೆ ಬಂದಿದ್ದ ದೇವೇಗೌಡರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ದೇವೇಗೌಡರು ಕಾರು ಹತ್ತುವಾಗ ಅಭಿಮಾನಿಯೊಬ್ಬ ರಾಗಿಮುದ್ದೆ ಪ್ರಿಯ ದೇವೇಗೌಡರಿಗೆ ಜೈ ಎಂದು ಜೈಕಾರ ಹಾಕಿದ್ದಾರೆ. ವಿಭಿನ್ನವಾದ ಜೈಕಾರದಿಂದ ದೇವೇಗೌಡ ಹಾಗೂ ಸ್ಥಳದಲ್ಲಿದ್ದ ಎಲ್ಲರು ಒಂದು ಕ್ಷಣ ನಗೆಗಡಲಲ್ಲಿ ತೇಲುವಂತಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ದೇವೇಗೌಡರು, ರೈತರೊಬ್ಬರು ಮುದ್ದೇ ಗೌಡರು ಅಂತಾ ಕರೆದಿರುವುದು ನನಗೆ ಖುಷಿಯಾಯಿತು