ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಹಬ್ಬಗಳೇ ಹೀಗೆ… ವಿಶೇಷ ಆಚರಣೆಗಳು… ವಿಚಿತ್ರ ಸಂಪ್ರದಾಯಗಳು… ಮೈಮೇಲೆ ಮಾರಮ್ಮ ಬರುತ್ತದೆಂದು ನಂಬಿದ ಭಕ್ತರು ಮುಳ್ಳಿನ ಪೊದೆಗಳ ಮೇಲೆ ಹಾರಿ ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ.ಚಾಮರಾಜನಗರ ತಾಲೂಕಿನ ಯಳಂದೂರು ಸಮೀಪದ ಗೂಳಿಪುರ ಎಂಬ ಊರಲ್ಲಿ ಪ್ರತಿ ವರ್ಷ ನಡೆಯುವ ಮಾರಮ್ಮನ ಹಬ್ಬದಂದು ಒಂದು ಸಮುದಾಯದ ಜನರು ಮುಳ್ಳಿನ ಪೊದೆಗಳಿಗೆ ಹಾರಿ ಭಕ್ತಿ ಮೆರೆಯುತ್ತಾರೆ.ಗ್ರಾಮದ ಕುಂಟು ಮಾರಮ್ಮ ಹಾಗೂ ಬಿಸಿಲು ಮಾರಮ್ಮ ಗ್ರಾಮ ದೇವತೆಗಳ ಜಾತ್ರೆಯಲ್ಲಿ ರಾಶಿ-ರಾಶಿ ಇರುವ