ಭಕ್ತಿಯೇ ಹಾಗೆ ಒಮ್ಮೆ ಭಕ್ತರನ್ನು ಮತ್ತೊಮ್ಮೆ ನೋಡುಗರನ್ನು ಚಕಿತಗೊಳಿಸುತ್ತದೆ. ಭಕ್ತನೊಬ್ಬ ಬೆನ್ನುಹುರಿಗೆ ಸರಳು ಚುಚ್ಚಿಕೊಂಡು ಕಿಲೋ ಮೀಟರ್ ಗಟ್ಟಲೇ ನೇತಾಡಿದ ಘಟನೆ ನಡೆದಿದೆ.ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ರಸ್ತೆಯಲ್ಲಿನ ವಡಕೆಹಳ್ಳದಲ್ಲಿ ಈ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಮಾರಿಹಬ್ಬದಲ್ಲಿ ಭಕ್ತರು ತಮ್ಮ ಬೇಡಿಕೆಗಳನ್ನು ಈಡೇರಿಸಿದ್ದಕ್ಕಾಗಿ ದೇವಿಗೆ ಹರಕೆ ತೀರಿಸಿದರು. ಈ ವೇಳೆ ಭಕ್ತರೊಬ್ಬರು ಬೆನ್ನುಹುರಿಗೆ ಕಬ್ಬಿಣದ ಕೊಂಡಿ ಚುಚ್ಚಿಕೊಂಡು ಬೊಲೆರೊ ವಾಹನದಲ್ಲಿ ಕಟ್ಟಿದ್ದ ಕಂಬದಲ್ಲಿ