ಶಶಿಕಲಾಗೆ ಕಾರಾಗೃಹದಲ್ಲಿ ವಿಶೇಷ ಅಡುಗೆ ಮನೆ ಮತ್ತು ವಿಐಪಿ ಸೌಲಭ್ಯ ನೀಡಲಾಗುತ್ತಿದೆ ಎಂಬ ಕಾರಾಗ್ಋಹ ಡಿಐಜಿ ರೂಪಾ ನೀಡಿರುವ ವರದಿಯನ್ನ ಡಿಜಿ ಸತ್ಯನಾರಾಯಣ ರಾವ್ ತಳ್ಳಿ ಹಾಕಿದ್ದಾರೆ. ಶಶಿಕಲಾ ಅವರಿಗೆ ಯಾವುದೇ ವಿಶೇಷ ಸೌಲಭ್ಯ ಒದಗಿಸಿಲ್ಲ. ಸಾಮಾನ್ಯ ಕೈದಿ ಇರುವ ಸೆಲ್`ನಲ್ಲೇ ಇರಿಸಲಾಗಿದೆ. ಡಿಐಜಿ ರೂಪಾ ಅವರಿಗೆ ಕಾರಾಗೃಹದ ಬಗ್ಗೆ ಗೊತ್ತಿಲ್ಲ. ಫೋಟೋ ತೆಗೆದು ಮಾಧ್ಯಮಗಳಿಗೆ ಕಳುಹಿಸುವುದು ಮಾತ್ರ ಗೊತ್ತಿದೆ. ಕಚೇರಿ ಸಮಯ ಮುಗಿದ ಮೇಲೆ ವರದಿ ನನಗೆ ಬಂದಿದೆ.