ಬೆಂಗಳೂರು: ಕರ್ನಾಟಕವನ್ನೇ ಬೆಚ್ಚಿಬೀಳಿಸಿದ್ದ ಧರ್ಮಸ್ಥಳದ ಸಾಲು ಸಾಲು ನಿಗೂಢ ಸಾವುಗಳು ಹಾಗೂ ಅಸ್ಥಿಪಂಜರ ಪತ್ತೆ ಹಗರಣದ ತನಿಖೆಗೆ ಈಗ ಅತ್ಯಂತ ಆಘಾತಕಾರಿ ತಿರುವು ಸಿಕ್ಕಿದೆ. ಪ್ರಕರಣದ ಮುಖ್ಯ ದೂರುದಾರ ಹಾಗೂ ಮಾಸ್ಕ್ ಧರಿಸಿ ಸುದ್ದಿಗೋಷ್ಠಿ ನಡೆಸಿದ್ದ ಮುಖವಾಡದ ಮನುಷ್ಯ ಚಿನ್ನಯ್ಯ, ಈಗ ತನಗೆ ಸುಳ್ಳು ಸಾಕ್ಷಿ ಹೇಳಲು ಪ್ರಭಾವಿ ನಟ ಪ್ರಕಾಶ್ ರಾಜ್ (ಪ್ರಕಾಶ್ ರೈ) ಹಾಗೂ ಒಂದು ದೊಡ್ಡ ಗ್ಯಾಂಗ್ ಪ್ರೇರೇಪಿಸಿತ್ತು ಎಂದು ಹೈಕೋರ್ಟ್ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ