ಬಿಜೆಪಿಗೆ ಸರಕಾರಕ್ಕೆ ಒಂದು ವರ್ಷದ ತುಂಬಿದ ಸಂಭ್ರಮ ಇದ್ದರೆ, ಕಾಂಗ್ರೆಸ್ ಟೀಕಾಸ್ತ್ರ ಮುಂದುವರಿಸಿದೆ. ಮಂತ್ರಿಮಂಡಲ ರಚನೆ ಇಲ್ಲದೆ, ಸಂತ್ರಸ್ತರಿಗೆ ಪರಿಹಾರ ಕೊಡದೇ, ಉಪ ಚುನಾವಣೆ ಮಂತ್ರಿ ಮಂಡಲ ವಿಸ್ತರಣೆ ಕಸರತ್ತು, ಮಂತ್ರಿಗಿರಿ ಹಗ್ಗಜಗ್ಗಾಟದಂತಹ ಆಟಗಳಲ್ಲಿಯೇ ಒಂದು ವರ್ಷ ಪೂರೈಸಿದೆ ಎಂದು ವ್ಯಂಗ್ಯವಾಡಿದ್ದಾರೆ.ಪ್ರಜಾಪ್ರಭುತ್ವವನ್ನು ಆಪರೇಷನ್ ಕಮಲದ ಮೂಲಕ ಕಗ್ಗೊಲೆ ಮಾಡೋಕೆ ಬಿಜೆಪಿ ಮುಂದಾಗಿದೆ ಎಂದು ಡಿಕೆಶಿ ಹೇಳಿದ್ದಾರೆ.ಅಧಿಕಾರದ ದುರಾಸೆಯಿಂದ ಬಿಜೆಪಿ ಪಕ್ಷ ಅಪರೇಷನ್ ಲೋಟಸ್ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ ಮಾಡುತ್ತಿದೆ.