ಈಶ್ವರಪ್ಪಗೆ ನಮ್ಮ ಜನ ನರ ತೋರಿಸ್ತಾರೆ ಎಂದ ಡಿಕೆಶಿ

ಹುಬ್ಬಳ್ಳಿ, ಗುರುವಾರ, 16 ಮೇ 2019 (14:32 IST)

ಕಾಂಗ್ರೆಸ್ ನವರೆಲ್ಲರೂ ನರ ಸತ್ತವರು ಅಂತ ಹೇಳಿಕೆ ನೀಡಿದ್ದ ಕೆ.ಎಸ್.ಈಶ್ವರಪ್ಪಗೆ ತಿರುಗೇಟು ನೀಡಿದ್ದಾರೆ ಸಚಿವ ಡಿಕೆಶಿ.

ನರ ಇದೆಯೋ ಸತ್ತಿದೆಯೋ ಅಂತ ಪರೀಕ್ಷೆ ಮಾಡೋ ಶಕ್ತಿ ಅವರಿಗೆ ಇದ್ದರೆ ನಮ್ಮ ಜನ ತೋರಿಸ್ತಾರೆ. ನರ, ಗಂಡಸ್ತನದ ಬಗ್ಗೆ ಪರೀಕ್ಷೆ ಕೊಟ್ಟು ನೋಡಲಿ. ಗಂಡಸ್ತನದ ಬಗ್ಗೆ ಪರೀಕ್ಷೆ ಮಾಡಲಿ. ಯಾರು ಗಂಡಸು, ನರ ಸತ್ತವರು ಅನ್ನೋದು ತಿಳಿಯುತ್ತೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ.

ಈ ರೀತಿ ಕೆಟ್ಟದಾಗಿ ಮಾತಾಡೋದೇ ಈಶ್ವರಪ್ಪನ ಸಂಸ್ಕೃತಿ ಎಂದು ಟೀಕೆ ಮಾಡಿದ್ರು.
ಮೈತ್ರಿ ಅಸಮಾಧಾನದ ಬಗ್ಗೆ ದೇವೇಗೌಡರು ರಾಹುಲ್ ಗಾಂಧಿಗೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಯಾವ ಪತ್ರ ವ್ಯವಹಾರವೂ ಆಗಿಲ್ಲ. ಇದು ಕೇವಲ ವದಂತಿ.

ರಾಗಾ, ದೇವೇಗೌಡರ ಒಪ್ಪಂದ ಮುಂದುವರೆಯುತ್ತೆ. ದೋಸ್ತಿ ಸರ್ಕಾರ ಕಿತ್ತೆಸೆಯೋಕೆ ಕಡಲೇಕಾಯಿ ಗಿಡ ಅಲ್ಲ‌.
20ಜನ ಶಾಸಕರು ನಮ್ಮ ಜತೆ ಇದ್ದಾರೆ ಅನ್ನೋ ಬಿಜೆಪಿಗರು, ಗೊಂದಲ ಸೃಷ್ಠಿ ಮಾಡೋದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದರು.

ಮೈತ್ರಿ ಬೇಡ  ಚುನಾವಣೆಗೇ ಹೋಗೋಣ ಅಂತ ಬಿಜೆಪಿ ಜೈಕಮಾಂಡ ನಿರ್ಧರಿಸಿದೆ. ನಾವೇನು ಇದನ್ನ ನೋಡಿಕೊಂಡು ಸುಮ್ಮನಿರಲ್ಲ. ಪ್ರಾರಂಭದಿಂದ ಅನೇಕ ಗಡುವು ನೀಡಿದ್ದಾರೆ. ಇವರ ರಾಜಕೀಯ ನೋಡಿ ಅಸಹ್ಯ ಆಗುತ್ತಿದೆ ಎಂದ್ರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು; ಕಾರಣ ನಿಗೂಢ

ಪರಸ್ಪರ ಪ್ರೀತಿಸುತ್ತಿದ್ದ ಯುವಕ-ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

news

ದಲಿತ ಸಿಎಂ ಎಂದು ಅವಮಾನಿಸಬೇಡಿ ಎಂದ ಖರ್ಗೆ

ಬಿಜೆಪಿಯವರು ಮಾತಿನ ಮಲ್ಲರು. ಕೇವಲ ಪ್ರಚಾರ ಮಾಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಹೀಗಂತ ...

news

ಖರ್ಗೆ ಸಿಎಂ ಆಗಬಹುದು ಎಂಬ ಸಿಎಂ ಹೇಳಿಕೆಗೆ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ?

ಬೆಂಗಳೂರು : ಖರ್ಗೆ ಸಿಎಂ ಆಗಬಹುದು ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಇದೀಗ ಸಿದ್ದರಾಮಯ್ಯ ಟ್ವೀಟ್ ...

news

ಅತ್ತೆಯನ್ನು ಮನೆಗೆ ಬರದಂತೆ ಮಾಡಲು ಅಳಿಯ ಮಾಡಿದ ಇಂತಹ ಖತರ್ನಾಕ್ ಪ್ಲಾನ್

ತನ್ನ ಮನೆಗೆ ಅತ್ತೆ ಪದೇ ಪದೇ ಬರುವುದನ್ನು ತಡೆಯಲು ಜೇಡರ ಹುಳವನ್ನು ಮನೆಯಲ್ಲಿ ಸಾಕಿಕೊಂಡಿರುವುದಾಗಿ ...