ಸಿದ್ದರಾಮಯ್ಯರನ್ನು ಚಾಮುಂಡೇಶ್ವರಿಯಲ್ಲಿ ಕುರುಬರು ಸೋಲಿಸಿದ್ರಾ?

ಕಲಬುರಗಿ, ಬುಧವಾರ, 15 ಮೇ 2019 (14:32 IST)

ಕುರುಬರು ದಡ್ಡರು ಅಂತ ಬಹಳ ಜನ ತಿಳಿದುಕೊಂಡಿದ್ದಾರೆ. ಅದೇ ಕುರುಬರು, ದಲಿತರು ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುವ ಮೂಲಕ ಜಾಣರು ಎಂದು ತೋರಿಸಿದ್ದಾರೆ. ಹೀಗಂತ ಬಿಜೆಪಿ ಹಿರಿಯ ಮುಖಂಡ ಟೀಕೆ ಮಾಡಿದ್ದಾರೆ.

ಚಿಂಚೋಳಿಯಲ್ಲಿ ಮಾತನಾಡಿದ ಎಂದು ಬಿಜೆಪಿ ಹಿರಿಯ ಮುಖಂಡ ಈಶ್ವರಪ್ಪ, ಸಮ್ಮಿಶ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 
ಸಿದ್ದರಾಮಯ್ಯ ಅವರಿಗೆ
ನಾನೇ ಸಿಎಂ ಅಂತಾ ಹುಚ್ಚು ಹಿಡಿದಿದೆ. ಆ ಹುಚ್ಚಿಗೆ ಭೈರತಿ ಬಸವರಾಜು, ಸೋಮಶೇಖರ್ ಮೊದಲಾದವರು ಗಾಳಿ ಹಾಕ್ತಾರೆ. ಸಿದ್ದರಾಮಯ್ಯ ನಾನೇ ಸಿಎಂ ಅಂದಾಗ ಬಾಯಿಮುಚ್ಕೊಂಡು ಕುತ್ಕೋ ಎಂದು ಖರ್ಗೆ ಹೇಳುತ್ತಾರೆ ಅಂತಾ ಅಂದುಕೊಂಡಿದ್ದೆ. ಈಶ್ವರ ನೀನು ಪರಮೇಶ್ವರ ಆಗಲು ಸಾಧ್ಯವಿಲ್ಲ ಎಂದು ಡಾ. ಪರಮೇಶ್ವರ್ ನನಗೆ ಹೇಳಿದ್ದಾರೆ.

ನೀವು ಪರಮೇಶ್ವರ ಆಗಿದ್ದರೆ ಮೂರನೇ ಕಣ್ಣು ತರೆದು ಸಿದ್ದರಾಮಯ್ಯ ಅವರನ್ನು ಭಸ್ಮ ಮಾಡಿಬಿಡುತ್ತಿದ್ದೀರಿ. ಆದರೆ ಅಧಿಕಾರದ ಆಸೆಯಿಂದ ಅದನ್ನು ನೀವು ಮಾಡಲಿಲ್ಲಾ ಹಾಗೂ ಸಿದ್ದರಾಮಯ್ಯ ಅವರಿಗೆ ಕಡಿವಾಣ ಹಾಕಲಿಲ್ಲಾ ಎಂದು ಲೇವಡಿ ಮಾಡಿದರು.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವ್ಯಕ್ತಿಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 116 ಕಬ್ಬಿಣದ ಮೊಳೆಗಳನ್ನು ಹೊರತೆಗೆದ ವೈದ್ಯರು

ಜೈಪುರ : ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ ಇದ್ದ ಬರೋಬ್ಬರಿ 116 ಕಬ್ಬಿಣದ ಮೊಳೆಗಳು ಹಾಗೂ ವೈರ್ ಗಳನ್ನು ...

news

ಕೆಆರ್ ಮಾರುಕಟ್ಟೆನಲ್ಲಿ 4 ಅಡಿ ಜಾಗಕ್ಕೆ ವ್ಯಾಪಾರಿಯ ಬರ್ಬರ ಹತ್ಯೆ

ಬೆಂಗಳೂರು : ಫುಟ್ ಪಾತ್ ಮೇಲೆ ನಿಂಬೆ ಹಣ್ಣಿನ ಅಂಗಡಿ ಹಾಕಲು 4 ಅಡಿ ಜಾಗದ ವಿಚಾರಕ್ಕೆ ...

news

ಜಮೀರ್ ಒಬ್ಬ ಕಳ್ಳ, ಆತ ವಾಚ್ ಮ್ಯಾನ್ ಕೆಲಸಕ್ಕೆ ನಾಲಾಯಕ್ ಎಂದ ಈಶ್ವರಪ್ಪ

ಹುಬ್ಬಳ್ಳಿ : ಆಗಾಗ ಮೈತ್ರಿ ಪಕ್ಷದ ನಾಯಕರ ವಿರುದ್ಧ ಟೀಕಾ ಪ್ರಹಾರ ಮಾಡುತ್ತಿರುವ ಬಿಜೆಪಿ ಮುಖಂಡ ...

news

ಜೀವ ಜಲಕ್ಕಾಗಿ ಜೀವ ಒತ್ತೆ ಇಡುತ್ತಿರೋ ಜನರು!

ಮಳೆಯಾಗದ ಹಿನ್ನಲೆಯಲ್ಲಿ ಕೆರೆಗಳು ಖಾಲಿ ಖಾಲಿಯಾಗಿದ್ದು, ಜನರು ಜೀವದ ಹಂಗು ತೊರೆದು ಜೀವಜಲಕ್ಕಾಗಿ ಹೋರಾಟ ...