ರಾಯಚೂರು : ಸರ್ಕಾರಿ ಉದ್ಯೋಗ ಕೈತಪ್ಪಿದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಡೆತ್ ನೋಟ್ ಬರೆದು ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ನಡೆದಿದೆ. ಚಿಕ್ಕಬೂದೂರು ಗ್ರಾಮದ 25 ವರ್ಷದ ಯುವಕ ಚನ್ನಬಸವ ದೇವದುರ್ಗದ ಖಾಸಗಿ ಶಾಲೆಯ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 6 ರಿಂದ 8ನೇ ತರಗತಿ ಶಿಕ್ಷಕರ ಹುದ್ದೆ ನೇಮಕಾತಿ ಮೊದಲ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ಚನ್ನಬಸವನಿಗೆ ಕೊನೆಗೆ ಉದ್ಯೋಗ ಕೈತಪ್ಪಿತ್ತು. ಬಳಿಕ ಮತ್ತೊಂದು