ಮೊಸರು- ಮಜ್ಜಿಗೆ ಇಲ್ಲದೆ ಊಟ ಪೂರ್ಣ ಆಗೋದೆ ಇಲ್ಲಾ. ಅದರಲ್ಲೂ ನಮ್ಮ ಕರ್ನಾಟಕದ ಜನರಿಗೆ ನಂದಿನಿ ಹಾಲು, ಮೊಸರು, ಮಜ್ಜಿಗೆ ಇರ್ಲೆಬೇಕು. ಆದರೆ ಶುದ್ಧವಾಗಿರಬೇಕಾದ ಪದಾರ್ಥ ಬೇರೆ ಥರಾನೇ ಇದ್ರೆ…? ಕೆಎಂಎಫ್ ನಿಂದ ತಯಾರಾಗುವ ನಂದಿನಿ ಹಾಲು ಉತ್ಪನ್ನಗಳೆಂದರೆ ಜನರಿಗೆ ಅಚ್ಚು ಮೆಚ್ಚು. ನಂದಿನಿ ಹಾಲು, ಮೊಸರು, ತುಪ್ಪಾ ಇತರೆ ನಂದಿನಿಯ ಹಾಲು ಉತ್ಪನ್ನಗಳನ್ನ ನಿತ್ಯ ಬಳಸದ ಜನರೇ ಇಲ್ಲಾ. ಅಂತಹ ನಂದಿನಿ ಮೊಸರು ಬಳಸುವ ಮುನ್ನಾ ಕೊಂಚ ಹುಷಾರಾಗಿರೋದು