ಬೆಂಗಳೂರು- ಡಿಕೆ ಶಿವಕುಮಾರ್ ರಾಜ್ಯ ಕಾಂಗ್ರೆಸ್ನ ಪಾಲಿಗೆ ಪ್ರಚಂಡ ಶಕ್ತಿ, ಕಷ್ಟದ ಸಮಯದಲ್ಲಿ ಐಸಿಯೂನಲ್ಲಿದ್ದ ಕಾಂಗ್ರೆಸ್ಗೇ ಆಕ್ಸಿಜನ್ ಕೊಟ್ಟ ಟ್ರಬಲ್ಶೂಟರ್ನ ಪಣವನ್ನ ಯಾರು ಕೂಡ ಅಲ್ಲಗಳೆಯಬಾರದು ಇವತ್ತು ಕಾಂಗ್ರೆಸ್ ಪ್ರಚಂಡ ದಿಗ್ವಿಜಯವನ್ನು ಸಾಧಿಸಿ, ೧೩೫ ಸೀಟ್ಗಳನ್ನು ಗಳಿಸುವ ಮೂಲಕ ಬಿಜೆಪಿ ಮತ್ತು ದಳಪತಿಗಳ ಕೋಟೆಯಲ್ಲಿ ನಡುಕವನ್ನು ಹುಟ್ಟಿಸಿದ್ದಾಗಿದೆ… ಹಾಗೇ ನೋಡಿದರೇ, ಕಾಂಗ್ರೆಸ್ ಅಧಿಕಾರದ ಸೂತ್ರವನ್ನು ಹಿಡಿದು, ಗ್ಯಾರಂಟಿ ದರ್ಬಾರ್ ನಡೆಸೋದಕ್ಕೆ ಮೂಲ ಕಾರಣ ಡಿಕೆಶಿ ಗಟ್ಟಿ ನಾಯಕತ್ವ, ಇದರ ಜೊತೆಗೆ ಸಿದ್ದರಾಮಯ್ಯನವರ ಅಹಿಂದ ವರ್ಗದ ಬಲ