ಹುಬ್ಬಳ್ಳಿ: ಬೆಂಕಿಯಲ್ಲಿ ಒಂದು ವರ್ಷದ ಮಗುವನ್ನು ಹಾಕಿ ತಗೆಯುವ ವಿಚಿತ್ರ ಸಂಪ್ರದಾಯ ಕುಂದಗೋಳ ತಾಲೂಕಿನ ಅಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಮೊಹರಂ ಹಬ್ಬದ ಆಚರಣೆಯ ಸಂದರ್ಭದಲ್ಲಿ ಮಕ್ಕಳಿಗೆ ರೋಗ ರುಜಿನಗಳು ಬಾರದಿರಲಿ ಎಂಬ ಉದ್ದೇಶದಿಂದ ಈ ಆಚರಣೆ ನಡೆಸಿಕೊಂಡು ಬರಲಾಗುತ್ತಿದೆ ಎನ್ನಲಾಗಿದೆ. ಬೇರೆ ಬೇರೆ ಗ್ರಾಮಗಳಿಂದ ಬಂದವರು ಬೇಡಿಕೊಂಡ ಹರಕೆ ತೀರಿಸಲು ಈ ರೀತಿ ಮಕ್ಕಳನ್ನು ಬೆಂಕಿ ಮೇಲೆ ಮಲಗಿಸುತ್ತಾರೆ. ಕೆಂಡದ ಮೇಲೆ ಬಾಳೆ ಎಲೆ ಇಟ್ಟು ಮಕ್ಕಳನ್ನು ಮಲಗಿಸುತ್ತಾರೆ. ಎರಡು ನಿಮಿಷಗಳ ನಂತರ