ಡಿಕೆಶಿ ಅಕ್ರಮ ಹಣ ಪ್ರಕರಣ; ಕೆ ಎನ್​​ ರಾಜಣ್ಣಗೆ ಸಮನ್ಸ್ ನೀಡಿದ ಇಡಿ ಅಧಿಕಾರಿಗಳು

ತುಮಕೂರು, ಬುಧವಾರ, 9 ಅಕ್ಟೋಬರ್ 2019 (11:05 IST)

ತುಮಕೂರು :ಡಿಕೆ ಶಿವಕುಮಾರ್ ಅವರ  ಅಕ್ರಮ ಹಣ ವ್ಯವಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಮಾಜಿ ಶಾಸಕ ವಿಚಾರಣೆಗೆ ಇಡಿ ಅಧಿಕಾರಿಗಳು ಮುಂದಾಗಿದ್ದಾರೆ.
ಅಕ್ರಮ ಹಣ ವ್ಯವಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಇಡಿ ಅಧಿಕಾರಿಗಳು ಡಿ.ಕೆ ಶಿವಕುಮಾರ್, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿಚಾರಣೆ ನಡೆಸುತ್ತಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಹರ್ಷಾ ಶುಗರ್ಸ್ ಕಾರ್ಖಾನೆ ಆರಂಭಿಸಲು ಅಪೆಕ್ಸ್ ಬ್ಯಾಂಕ್ ಅಡಿ ಬರುವ ಕೆಲ ಬ್ಯಾಂಕುಗಳ ಮೂಲಕ 300 ಕೋಟಿ ಸಾಲ ನೀಡಿದ್ದರು. ಆದಕಾರಣ ರಾಜಣ್ಣ ಅವರು ಅಪೆಕ್ಸ್ ಬ್ಯಾಂಕ್ ಗಳ ಅಧ್ಯಕ್ಷರಾಗಿದ್ದ ಹಿನ್ನಲೆ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.


ದೆಹಲಿಯ ಲೋಕನಾಯಕ್ ಭವನದ ಇಡಿ ಕಚೇರಿಯಲ್ಲಿ ಮಾಜಿ ಶಾಸಕ ಕೆ.ಎಸ್ ರಾಜಣ್ಣ ಅವರನ್ನು ಇಂದು ಇಡಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಣ್ಣ ಅವರು ಈಗಾಗಲೇ ದೆಹಲಿ ತಲುಪಿದ್ದಾರೆ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸುಮಲತಾ ಅಂಬರೀಶ್ ತೆಗೆದುಕೊಂಡ ಈ ನಿರ್ಧಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಗರಂ

ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರದ ಸದಸ್ಯರಾದ ಸುಮಲತಾ ಅಂಬರೀಶ್ ಅವರು ತೆಗೆದುಕೊಂಡ ನಿರ್ಧಾರವೊಂದು ಇದೀಗ ...

news

ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿದೆ ಮನುಷ್ಯನ ಮುಖ ಹೋಲುವ ಈ ನಾಯಿ

ಮನುಷ್ಯನ ಮುಖವನ್ನೇ ಹೋಲುವ ನಾಯಿಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡುತ್ತಿದೆ.

news

ಸಮಾಧಿಯಲ್ಲಿದ್ದ ವೃದ್ಧೆಯ ಮೃತದೇಹ ಹೊರತೆಗೆದು ಅಪ್ರಾಪ್ತರಿಬ್ಬರು ಎಸಗಿದ್ದಾರೆ ಇಂತಹ ಘೋರ ಕೃತ್ಯ

ಫಿಲಿಫೈನ್ಸ್ : ಅಪ್ರಾಪ್ತ ಬಾಲಕರಿಬ್ಬರು ಸಮಾಧಿಯಿಂದ ವೃದ್ಧೆಯ ಮೃತದೇಹ ಹೊರತೆಗೆದು ಅತ್ಯಾಚಾರ ಎಸಗಿದ ಘಟನೆ ...

news

ಸಾಲ ಮಾಡುವಲ್ಲಿ ದಾಖಲೆ ಮಾಡಿದ ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ

ಇಸ್ಲಾಮಾಬಾದ್: ಜಾಗತಿಕವಾಗಿ ಮೂಲೆಗುಂಪಾಗಿರುವ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದ್ದು, ...