ಬೆಳಗಾವಿ ಜಿಲ್ಲೆ ಬಗ್ಗೆ ಮಹಾರಾಷ್ಟ್ರ ಸಿಎಂ ಟ್ವೀಟ್ ಗೆ ಎಚ್ಚರಿಕೆಯಿಂದ ಪ್ರತಿಕ್ರಿಯಿಸಿದ ಡಿಕೆಶಿ

ಬೆಂಗಳೂರು| pavithra| Last Modified ಸೋಮವಾರ, 18 ಜನವರಿ 2021 (11:51 IST)
ಬೆಂಗಳೂರು : ಬೆಳಗಾವಿ ಜಿಲ್ಲೆ ಬಗ್ಗೆ ಮಹಾರಾಷ್ಟ್ರ ಸಿಎಂ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರದ ಹಿನ್ನಲೆಯಲ್ಲಿ ಡಿಕೆ ಶಿವಕುಮಾರ್  ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ ಎನ್ನಲಾಗಿದೆ.

ರಾಜಕೀಯ ಹೇಳಿಕೆಗೆ ಹೆಚ್ಚಿನ ಮಹತ್ವ ನೀಡೋದು ಬೇಡ. ನಾವು ರಾಜ್ಯದ ಹಿತ ಕಾಯುವ ಎಲ್ಲಾ ಕೆಲಸ ಮಾಡುತ್ತೇವೆ. ಉದ್ಧವ್ ಹೇಳಿಕೆ ಅವರ ಪಕ್ಷ, ಅವರ ವೈಯಕ್ತಿಕ ಹೇಳಿಕೆ.  ಕರ್ನಾಟಕದ ಜನತೆ ಈ ಬಗ್ಗೆ ಚಿಂತೆ ಮಾಡುವುದು ಬೇಡ. ಈಗಾಗಲೇ ನೆಲ, ಜಲ ವಿಚಾರದಲ್ಲಿ ಗಡಿ ನಿರ್ಧಾರವಾಗಿದೆ ಎಂದು ಡಿಕೆ ಶಿವಕುಮಾರ್ ಎಚ್ಚರಿಕೆಯ ಹೇಳಿಕೆ ನೀಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :