ಕೇಸ್ ಹಿಂಪಡೆದರೂ ದಿನೇಶ್ ಕಲ್ಲಳ್ಳಿಗೆ ತಪ್ಪದು ಸಿಡಿ ವಿವಾದ

ಬೆಂಗಳೂರು| Krishnaveni K| Last Modified ಸೋಮವಾರ, 8 ಮಾರ್ಚ್ 2021 (09:45 IST)
ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ವಾಪಸ್ ಪಡೆದರೂ ನಾಗರಿಕ ಹಕ್ಕು ಹೋರಾಟಗಾರ ದಿನೇಶ್ ಕಲ್ಲಳ್ಳಿಗೆ ಈ ಪ್ರಕರಣದಿಂದ ಮುಕ್ತಿ ಸಿಗದು.

 
ದೂರು ವಾಪಸ್ ಪಡೆದ ಬಗ್ಗೆ ದಿನೇಶ್ ಕಲ್ಲಳ್ಳಿ ಪೊಲೀಸರಿಗೆ ವಕೀಲರ ಮೂಲಕ ಪತ್ರ ರವಾನಿಸಿದ್ದಾರೆ. ಮಹಿಳೆಗೆ ನ್ಯಾಯ ಒದಗಿಸುವುದೇ ನನ್ನ ಉದ್ದೇಶವಾಗಿತ್ತು. ಆದರೆ ಇಲ್ಲಿ ದೂರುದಾರರನ್ನೇ ಅನುಮಾನಿಸಲಾಗುತ್ತಿದೆ. ಹೀಗಾಗಿ ಪ್ರಕರಣ ಹಿಂಪಡೆಯುತ್ತಿರುವುದಾಗಿ ದಿನೇಶ್ ಕಲ್ಲಳ್ಳಿ ಹೇಳಿದ್ದಾರೆ.
 
ಆದರೆ ದಿನೇಶ್ ವಕೀಲರ ಮೂಲಕ ದೂರು ಹಿಂಪಡೆಯುವ ಹೇಳಿಕೆ ನೀಡಿದ್ದಾರಷ್ಟೇ. ಇದನ್ನು ತಿರಸ್ಕರಿಸಲಾಗುತ್ತಿದೆ. ಯುವತಿಯ ಪತ್ತೆ ಮಾಡಿ ಆಕೆಯ ಹೇಳಿಕೆ ದಾಖಲಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಹೀಗಾಗಿ ದೂರು ವಾಪಸ್ ಪಡೆದರೂ ದಿನೇಶ್ ಹೇಳಿಕೆ ನೀಡಲು ಪೊಲೀಸರು ಮತ್ತೆ ಠಾಣೆಗೆ ಕರೆಸಿಕೊಳ್ಳಲಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :