ಭೂಪಸಂದ್ರದ ಸಮೀಪವಿರುವ ಭೂಮಿ ಡಿನೋಟಿಫೈ ವಿಚಾರ ಕುರಿತಂತೆ ಸಿಎಂ ಸಿದ್ರಾಮಯ್ಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಲಾಗಿದೆ. ಬಿಜೆಪಿಯ ವಿಧಾನಪರಿಷತ್ ಸದಸ್ಯ ಬಿ.ಜಿ.ಪುಟ್ಟಸ್ವಾಮಿ, ಎಸಿಬಿಗೆ ದೂರು ದಾಖಲಿಸಿದ್ದು ಅವರೊಂದಿಗೆ ಶಾಸಕ ಮುನಿರಾಜು ಮತ್ತು ಎನ್.ಆರ್.ರಮೇಶ್ ಸಾಥ್ ನೀಡಿದ್ದಾರೆ. ದೂರಿನಲ್ಲಿ ಸತ್ಯಾಂಶವಿಲ್ಲದಿದ್ರೆ ನಾನು ನೇಣಿಹಾಕಿಕೊಳ್ಳುತ್ತೇನೆ. ದೂರಿನಲ್ಲಿ ಸತ್ಯಾಂಶವಿದ್ದರೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ, ರಾಜ್ಯದ ಜನತೆಗೆ ಸತ್ಯ ಸಂಗತಿ ಗೊತ್ತಾಗಲಿ ಎಂದು ಸವಾಲ್ ಹಾಕಿದ್ದಾರೆ. ಪುಟ್ಟಸ್ವಾಮಿ