ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಗೆಲುವು ಸಾಧಿಸಿದ್ದರಿಂದ ರಾಜ್ಯದಲ್ಲಿ ಕೂಡ ಬಿಜೆಪಿ ಗೆಲುವಿನ ಹುಮ್ಮಸ್ಸಿನಿಂದಿರುವಾಗಲೇ ಮತ್ತೆ ಭಿನ್ನಮತ ಕಾಣಿಸಿಕೊಂಡಿದೆ.ಗದಗ ಜಿಲ್ಲೆಯಲ್ಲಿ ಆಯೋಜಿಸಿದ್ದ ಬಿಜೆಪಿಯ ಪರಿವರ್ತನಾ ಯಾತ್ರೆ ಕಾರ್ಯಕ್ರಮದ ವೇದಿಕೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಅಕ್ಕಪಕ್ಕದಲ್ಲೇ ಕುಳಿತರೂ ಒಬ್ಬರ ಮುಖ ಒಬ್ಬರು ನೋಡದೆ ಇರುವುದು ಇಬ್ಬರ ನಡುವೆ ವೈಮನಸ್ಸು ಇರುವುದನ್ನು ತೋರಿಸಿಕೊಟ್ಟಿದೆ.ಒಂದು ತಾಸಿಗೂ ಅಧಿಕ ಸಮಯ ವೇದಿಕೆಯಲ್ಲಿದ್ದರೂ ಒಬ್ಬರ ಮುಖವನ್ನು ಒಬ್ಬರು