ಜಮಖಂಡಿ ವಿಧಾನಸಭೆ ಉಪಚುನಾವಣೆಯ ಫಲಿತಾಂಶ ನ.12ರಂದು ಹೊರ ಬೀಳಲಿದ್ದು, ಬಾಗಲಕೋಟೆ ಜಿಲ್ಲಾಡಳಿತ ಸಲಕಸಿದ್ದತೆಗಳನ್ನ ಮಾಡಿಕೊಂಡಿದೆ.ಜಮಖಂಡಿ ನಗರದ ಮಿನಿವಿಧಾನಸೌಧದಲ್ಲಿ ಮತ ಎಣಿಕೆ ನಡೆಯಲಿದ್ದು, ಚುನವಣಾ ಅಧಿಕಾರಿಗಳು ಮತ ಎಣಿಕೆಗೆ ಬೇಕಾದ ವ್ಯವಸ್ಥೆಗಳನ್ನ ಮಾಡಿಕೊಂಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಜೆ.ಶಾಂತಾರಾಂ, ಮತ ಎಣಿಕೆಗೆ 14 ಟೇಬಲ್ಗಳ ವ್ಯವಸ್ಥೆಯನ್ನ ಮಾಡಿಕೊಂಡಿದ್ದು, ಒಂದು ಟೇಬಲಗೆ ಮೂರುಜನ ಚುನಾವಣಾ ಸಿಬ್ಬಂದಿಯನ್ನ ನೇಮಿಸಲಾಗಿದೆ. ಏಜೆಂಟರುಗಳಿಗೆ, ಪಕ್ಷದ ಮುಖಂಡರುಗಳಿಗೆ, ಅಭ್ಯರ್ಥಿಗಳಿಗೆ ಕೂರಲು ಪ್ರತ್ಯೇಕ ಆಸನದ ವ್ಯವಸ್ಥೆ